ಕಸಿಮಾಡುವಿಕೆ (ಪ್ರಾಣಿಗಳಲ್ಲಿ)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ

ಅಂಗಾಂಶದ ಮತ್ತು ಅಂಗದ ಕಸಿ ಮಾಡುವಿಕೆ ಅಥವಾ ನಾಟಿ ಹಾಕುವಿಕೆಯಂತೆಯೇ (ಗ್ರಾಫ್ಟಿಂಗ್, ಟ್ರಾನ್ಸ್‍ಪ್ಲಾಂಟೇಷನ್) ಕಪ್ಪೆ, ಇಲಿ ಮುಂತಾದವುಗಳಲ್ಲೂ ಒಂದು ಪ್ರಾಣಿಯ ದೇಹದ ಒಂದು ಭಾಗದಿಂದ ಇನ್ನೊಂದಕ್ಕೆ ಅಥವಾ ಒಂದು ಪ್ರಾಣಿಯಿಂದ ಇನ್ನೊಂದು ಪ್ರಾಣಿಗೆ ಅಂಗಾಂಶಗಳನ್ನೊ (ಊತಕ). ಅಂಗಗಳನ್ನೊ ತೆಗೆದು ನಾಟಿ ಹಾಕಬಹುದು. ಈ ವಿಧಾನವನ್ನನುಸರಿಸಿ ಮತ್ತೊಂದಕ್ಕೆ ಯಶಸ್ವಿಯಾಗಿ ವಿನಿಮಯ ಮಾಡಲಾಗಿದೆ. ಪ್ರಾಣಿಗಳ ಬೆಳೆವಣಿಗೆಯಲ್ಲಿ ನ್ಯೂಕ್ಲಿಯಸ್ ಯಾವ ಪಾತ್ರ ವಹಿಸುವುದೆನ್ನುವುದರ ಬಗ್ಗೆ ಅರಿಯಲು ಈ ಪ್ರಯೋಗ ಸಹಕಾರಿಯಾಗಿದೆ. ಇದರಂತೆಯೇ ಇಲಿಗಳಲ್ಲಿ ಚರ್ಮದ ಕಸಿ ಮಾಡುವಿಕೆಯ ಬಗ್ಗೆ ಅನೇಕ ಪ್ರಯೋಗಗಳು ನಡೆದಿವೆ. ಕಸಿಮಾಡುವಿಕೆಯಲ್ಲಿ ನಾನಾಬಗೆಯ ತೊಂದರೆಗಳು ಹುಟ್ಟುತ್ತವೆ. ಈ ತೊಂದರೆಗಳಲ್ಲಿ ಮುಖ್ಯವಾದುವು ಇವು: 1 ನಾಟಿ ಹಾಕಿದ ಭಾಗ ರಕ್ತನಾಳಗಳನ್ನು ಬೆಳೆಸಿಕೊಂಡು ತನಗೆ ಬೇಕಾದ ಪೋಷಕವಸ್ತು ಹಾಗೂ ಆಮ್ಲಜನಕವನ್ನು ಪಡೆಯಬೇಕಾಗುವುದು. 2 ನಾಟಿ ಹಾಕಿದ ಕೆಲವು ದಿನಗಳಲ್ಲೇ ವಿರೋಧಕ್ರಿಯೆಯೊಂದು ಆರಂಭವಾಗಿ ದಾನ ಪಡೆದ ದೇಹ ಈ ಕಸಿಯನ್ನು ವಿಸರ್ಜಿಸುತ್ತದೆ. ಇದಕ್ಕೆ ಮುಖ್ಯ ಕಾರಣ ದಾನ ಪಡೆದ ಪ್ರಾಣಿಯ ರೋಗರಕ್ಷಣಾಕ್ರಮ: ದೇಹಕ್ಕೆ ಸೇರುವ ಬ್ಯಾಕ್ಟೀರಿಯ ಮುಂತಾದುವುಗಳ ಆಕ್ರಮಣವನ್ನು ಎದುರಿಸಲು ದೇಹ ಪ್ರತಿಕಾಯಗಳನ್ನು (ಆಂಟಿ ಬಾಡೀಸ್) ಉತ್ಪತ್ತಿ ಮಾಡುವಂತೆಯೇ ನಾಟಿ ಹಾಕಿದ ಭಾಗದ ವಿರುದ್ಧವಾಗಿಯೂ ದಾನಪಡೆದ ಪ್ರಾಣಿಯ ದೇಹ ಪ್ರತಿಕಾಯಗಳನ್ನು ಉತ್ಪತ್ತಿ ಮಾಡುವುದು. ಈಗೀಗ ಬೆಳೆವಣಿಗೆ ಮತ್ತು ಜೀವಕೋಶ ವಿಭಜನೆಯನ್ನು ನಿರೋಧಿಸುವ ಔಷಧಿಗಳಾದ ಇಮ್ಯೂರಾನ್, ಆಕ್ಟಿನೋಮೈಸಿನ್_ಸಿ ಮತ್ತು ಸಂಯೋಜಿಸಲಾದ ಅಂಗವನ್ನು ತ್ಯಜಿಸುವ ಪ್ರತಿಕ್ರಿಯೆಯನ್ನು ನಿರೋಧಿಸುವ ವಸ್ತುವಾದ ಆಡ್ರಿನಲ್ ಗ್ರಂಥಿಯ ಕಾರ್ಟಿಕೋಸ್ಟೀರಾಯಿಡ್ ಹಾರ್ಮೋನುಗಳನ್ನೂ ಹಾಗೂ ಪ್ರತಿ ಪದಾರ್ಥ ಉತ್ಪತ್ತಿಯಲ್ಲಿ ಮುಖ್ಯ ಪಾತ್ರ ವಹಿಸುವ ಅಂಗಗಳಾದ ಥೈಮಸ್, ಗುಲ್ಮ ಮತ್ತು ಪಕ್ಷಿಗಳಲ್ಲಿನ ಬರ್ಸ ಫ್ಯಾಬ್ರಿಕಸ್ ಮುಂತಾದುವುಗಳನ್ನು ತೆಗೆದು ಸಂಯೋಜಿಸುವುದರಿಂದ ಈ ವಿರೋಧ ಕ್ರಿಯೆಯನ್ನು ಯಶಸ್ವಿಯಾಗಿ ಎದುರಿಸಲಾಗಿದೆ. ಕಾರ್ಟಿಕೋಸ್ಟೀರಾಯ್ಡ್ ಹಾರ್ಮೋನುಗಳನ್ನು ಉಪಯೋಗಿಸುವ ವಿಧಾನವನ್ನು ಸಿ. ಜûುಕೋವಸ್ಕಿ ಮತ್ತು ಸಿ.ಎಂ. ಕ್ಯಾಲೊವೆ ಅವರು ಪ್ರಾಣಿಗಳಲ್ಲಿಯೂ ಟಿ. ಸ್ಟಾರ್ಸಲ್ ಮತ್ತು ಅವರ ಸಂಗಡಿಗರು ಮನುಷ್ಯನಲ್ಲಿಯೂ ಅನುಸರಿಸಿದ್ದಾರೆ. ಅಲ್ಲದೆ ದಾನ ಪಡೆದ ಪ್ರಾಣಿಯ ದೇಹದ ಮೇಲೆ ಅಥವಾ ನಾಟಿ ಹಾಕುವ ಅಂಗಾಂಶದ ಮೇಲೆ ಮಾರಕವಲ್ಲದ ಪ್ರಮಾಣದಲ್ಲಿ ಎಕ್ಸ್_ಕಿರಣಗಳನ್ನು ಹಾಯಿಸಿ ಪ್ರತಿಕ್ರಿಯೆ ಪ್ರಚೋದಕ ವಸ್ತುಗಳನ್ನು (ಅಂಟಿಜೆನ್ಸ್) ನಾಶ ಮಾಡಬಹುದು. ಇದರಿಂದ ದಾನಪಡೆವ ಪ್ರಾಣಿಯಲ್ಲಿ ಪ್ರತಿ ಕಾಯಗಳ ತಯಾರಿ ನಿಂತುಹೋಗುತ್ತದೆ. ಆದರೆ ದಾನಪಡೆದ ಪ್ರಾಣಿ ತನ್ನೆಲ್ಲ ರೋಗನಿರೋಧಕ ಶಕ್ತಿಯನ್ನು ಕಳೆದುಕೊಳ್ಳುವುದೇ ಇದರಲ್ಲಿನ ಒಂದು ದೊಡ್ಡ ನ್ಯೂನತೆ. ಸ್ಟಾರ್ಸಲ್ ಅವರು ವಿವಿಧ ರಕ್ತಗುಂಪುಗಳ ನಡುವೆ ಪ್ರಯೋಗಗಳನ್ನು ನಡೆಸಿ ಔ ಮತ್ತು ಖh+ಗುಂಪಿನ ಮನುಷ್ಯರಿಂದ ಬೇರೆ ಯಾವ ಗುಂಪಿನ ಮನುಷ್ಯರಿಗೂ ಹಾಗೆಯೆ ಯಾರಿಂದ ಬೇಕಾದರೂ ಂಃ ಗುಂಪಿಗೂ ಕಸಿಮಾಡಬಹುದೆಂದೂ ತಿಳಿಸಿದ್ದಾರೆ. ಇದೇ ದೆಸೆಯಲ್ಲಿ ಕಳೆದ ಮೂರು ದಶಕಗಳಿಂದ ಹೆಚ್ಚಾಗಿ ಪ್ರಯೋಗಗಳನ್ನು ನಡೆಸಿದ ಬ್ರಿಟನ್ನಿನ ಜೀವಶಾಸ್ತ್ರಜ್ಞ ಪಿ.ಬಿ. ಮೆಡಾವರ್ ಎಂಬುವರಿಗೆ 1960ರಲ್ಲಿ ನೋಬೆಲ್ ಪಾರಿತೋಷಕ ಸಿಕ್ಕಿದೆ.        

(ನೋಡಿ- ಕಸಿಮಾಡುವಿಕೆ,-ಅಂಗಾಂಶದ-ಮತ್ತು-ಅಂಗದ)

 

 (ಎಚ್.ಬಿ.ಡಿ.)